ರಾತ್ರಿ ಮತ್ತು ಮುಂಜಾನೆ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರಿನ ರಸ್ತೆಗಳು ತೊಯ್ದು ತೊಪ್ಪೆಯಾಗಿದೆ. ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸಾವರರು ಪರದಾಡಿಕೊಂಡೆ ವಾಹನ ಚಾಲನೆ ಮುಂದುವರೆಸಿದ್ದಾರೆ. ನಗರದ ಪ್ರತಿಷ್ಠಿತ ರಿಚ್ಮಂಡ್ ರಸ್ತೆ ಕೆರೆಯಂತಾಗಿದೆ.ಸತತವಾಗಿ ಸುರಿದ ಮಳೆಯಿಂದಾಗಿ ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ಹರಿದು ಜನರು ಪರದಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣವಾಗಿರುವ ರಸ್ತೆಯಲ್ಲೆ ಅವ್ಯವಸ್ಥೆ ಮುಂದುವರೆದಿದೆ.ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹೋಗದ ರೀತಿ ರಸ್ತೆ ನಿರ್ಮಾಣ