ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲು ಶಾಮನೂರು ಶಿವಶಂಕರಪ್ಪ ಹಿಂದೇಟು ಹಾಕಿರುವುದು ಕೈ ಪಾಳೆಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಶಾಮನೂರುಗೆ ಪರ್ಯಾಯವಾಗಿ ಅಭ್ಯರ್ಥಿ ಹುಡುಕಾಟವನ್ನು ಕಾಂಗ್ರೆಸ್ ಶುರುವಿಟ್ಟುಕೊಂಡಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಕೈ ನಾಯಕರಿಂದ ಹುಡುಕಾಟ ನಡೆದಿದೆ. ಈಗಾಗಲೇ ಇಬ್ಬರಿಗೆ ಬುಲಾವ್ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಂಜಪ್ಪ ಹಾಗೂ ತೇಜಸ್ವಿ ಪಟೇಲ್ ಗೆ ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಹೆಚ್.ಬಿ ಮಂಜಪ್ಪ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ತೇಜಸ್ವಿ