ಚಿಂಚೋಳಿ : ಚಿಂಚೋಳಿಗೆ ನೀಡಿದ ಅನುದಾನ ಕಡಿತದ ಕುರಿತು ಬಿಜೆಪಿ ಸಂಸದ ಉಮೇಶ್ ಜಾಧವ್ ಅವರಿಗೆ ಕೈ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.ಚಿಂಚೋಳಿ ಅಭಿವೃದ್ಧಿಗೆ ಅನುದಾನ ನೀಡ್ತಿಲ್ಲವೆಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಆರೋಪಿಸಿ ರಾಜೀನಾಮೆ ನೀಡಿದ್ರಿ. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ನೀವು ರಾಜೀನಾಮೆ ನೀಡಿದ್ದೀರಿ, ಬಳಿಕ ಬಿಜೆಪಿಗೆ ಹೋಗಿ ನಿಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ ನಿಮ್ಮ ಪುತ್ರನನ್ನು ಗೆಲ್ಲಿಸಿಕೊಂಡಿದ್ದೀರಿ. ಈಗ ಈ ಹಿಂದೆ ನೀಡಿದ್ದ ಅನುದಾನವನ್ನೂ ಕಡಿತ ಮಾಡಿದ್ದಾರೆ.