ಬೆಂಗಳೂರು : ಮೈತ್ರಿ ಸರ್ಕಾರದ ಅತೃಪ್ತ ಶಾಸಕರಲ್ಲೊಬ್ಬರಾದ ಎಂಟಿಬಿ ನಾಗರಾಜ್ ಅವರು ಕಂಡಿಷನ್ ಒಂದರ ಮೇರೆಗೆ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಮೈತ್ರಿಪಕ್ಷಗಳ ನಾಯಕರ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ನನ್ನ ಜೊತೆ ರಾಜೀನಾಮೆ ನೀಡಿದ ಡಾ| ಕೆ. ಸುಧಾಕರ್ ಅವರು ರಾಜೀನಾಮೆ ವಾಪಾಸ್ ಪಡೆದರೆ ನಾನು ವಾಪಸ್ ಪಡೆಯುತ್ತೇನೆ. ನಾನು ಹಾಗೂ ಸುಧಾಕರ್ ಒಟ್ಟಿಗೆ