ಭಾರೀ ಸೋಲಿಗೆ ಕಂಗೆಟ್ಟ ಎಂಟಿಬಿ ನಾಗರಾಜ್ - ಬಿಜೆಪಿ ಮುಖಂಡರಿಗೆ ಹಿಗ್ಗಾ ಮುಗ್ಗಾ ಕ್ಲಾಸ್

ಬೆಂಗಳೂರು| Jagadeesh| Last Modified ಸೋಮವಾರ, 9 ಡಿಸೆಂಬರ್ 2019 (16:22 IST)
ಉಪ ಚುನಾವಣೆಯ ಸೋಲಿನಿಂದಾಗಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗರಂ ಆಗಿದ್ದು, ಪಕ್ಷದ ಮುಖಂಡರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾಗುತ್ತಿದೆ.

ಹೊಸಕೋಟೆ ಮತಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರೋ ಎಂಟಿಬಿ ನಾಗರಾಜ್ ಸೋಲು ಕಂಡಿದ್ದಾರೆ. ಸೋಲಿನ ರಿಸಲ್ಟ್ ನೋಡಿ ಕಂಗಾಲಾಗಿದ್ದಾರೆ.

ಹೀಗಾಗಿ ಸೋಲು ಖಚಿತವಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರನ್ನು ಬಾಯಿಗೆ ಬಂದಂಗೆ ಉಗಿದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಸೋತು ಸುಣ್ಣವಾಗಿರೋ ಎಂಟಿಬಿ ಮನೆಯತ್ತ ಯಾವ ಕಾರ್ಯಕರ್ತ, ಮುಖಂಡರು ಸುಳಿಯದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಯಿತು.


 
ಇದರಲ್ಲಿ ಇನ್ನಷ್ಟು ಓದಿ :