ಬೆಂಗಳೂರು : ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರ ಮನೆಗೆ ಸಚಿವ ಡಿಕೆ ಶಿವಕುಮಾರ್ ಅವರು ಬೆಳಿಗ್ಗೆ ಸುಮಾರು 5 ಗಂಟೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಅವರ ಮನವೊಲಿಸಲು ಕಸರತ್ತು ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ವೇಳೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಮೈತ್ರಿ ಬೇಕಾಗಿರುವುದು ನಿಮಗೆ, ದೇವೇಗೌಡರ ಕುಟುಂಬಕ್ಕೆ, ಡಿಸಿಎಂ ಪರಮೇಶ್ವರ್ ಗೆ. ನಾನು ಹೆಸರಿಗಷ್ಟೇ ಸಚಿವನಾಗಿದ್ದೇನೆ. ವಸತಿ ಇಲಾಖೆಯಲ್ಲಿ ಸಿಎಂ