ಬೆಂಗಳೂರು : ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮಾಧ್ಯಮದವರು ಏನೇ ಕೇಳಿದರೂ ಒಂದಕ್ಕೂ ಉತ್ತರಿಸದೆ ಮಾಧ್ಯಮಗಳಿಗೆ ಕೈಮುಗಿದು ಹೊರಟ ಘಟನೆ ಇಂದು ನಡೆದಿದೆ. ಈ ಹಿಂದೆ ಅನೇಕ ಬಾರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಇತರ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಎಂಟಿಬಿ ನಾಗರಾಜ್ ಇಂದು ಮಾಧ್ಯಮದವರ ಜೊತೆ ಮಾತನಾಡದೇ ನನ್ನನ್ನು ಏನೂ ಕೇಳಬೇಡಿ, ನಾನು ಏನೂ ಹೇಳುವುದಿಲ್ಲ ಎಂದು ಮಾಧ್ಯಮಗಳಿಗೆ ಕೈಮುಗಿದು ಹೊರಟು ಹೋಗಿದ್ದಾರೆ ಎನ್ನಲಾಗಿದೆ. ಎಂಟಿಬಿ