ಬೆನ್ನು ಬಿಡದ ಮುಂಬೈ ಮಾರಿ ಕಾಟ, ಇಬ್ಬರು ಬಲಿ

ಕಲಬುರಗಿ| Jagadeesh| Last Modified ಗುರುವಾರ, 9 ಜುಲೈ 2020 (20:35 IST)
ಮುಂಬೈ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರಲ್ಲಿ ಕೊರೊನಾ ಕೇಸ್ ಗಳು ಪತ್ತೆಯಾಗತೊಡಗಿವೆ.

ಕಲಬುರಗಿಯಲ್ಲಿ 85 ಹೊಸ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ಪ್ರವಾಸದಿಂದ ಜಿಲ್ಲೆಗೆ ಮರಳಿ ಬಂದವರು ಹಾಗೂ ರೋಗಿಗಳ ಪ್ರಥಮ ಸಂಪರ್ಕದಲ್ಲಿದ್ದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ಕ್ವಾರಂಟೈನ್ ಪ್ರದೇಶದಲ್ಲಿದ್ದ ಕೆಲವು ಜನರಲ್ಲಿಯೂ ಕೊರೊನಾ ವೈರಸ್ ಕಾಣಿಸಿಕೊಂಡಿದೆ.

ಈ ಮೂಲಕ ಕಲಬುರಗಿಯಲ್ಲಿ ಈವರೆಗೆ 1901 ಕೊರೊನಾ ಪಾಸಿಟಿವ್ ಕೇಸ್ ಗಳು ದೃಢಪಟ್ಟಂತೆ ಆಗಿವೆ. 1392 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, ಡೆಡ್ಲಿ ಕೊರೊನಾಕ್ಕೆ ಒಟ್ಟು32 ಜನರು ಬಲಿಯಾಗಿದ್ದಾರೆ. 477 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದೆ.


 
 
ಇದರಲ್ಲಿ ಇನ್ನಷ್ಟು ಓದಿ :