ಅತೃಪ್ತ ಶಾಸಕರ ಮನವೊಲಿಸಲು ಹೋಟೆಲ್ ಗೆ ಬಂದ ಡಿಕೆ ಶಿವಕುಮಾರ್ ರನ್ನು ತಡೆದ ಮುಂಬೈ ಪೊಲೀಸರು

ಮುಂಬೈ, ಬುಧವಾರ, 10 ಜುಲೈ 2019 (10:21 IST)

ಮುಂಬೈ : ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ತಂಗಿದ್ದ ಹೋಟೆಲ್ ಬಳಿಗೆ ಸಚಿವ ಡಿಕೆ ಶಿವಕುಮಾರ್ ಅವರು ಆಗಮಿಸಿದ್ದು, ಆದರೆ ಈ ವೇಳೆ ಡಿಕೆಶಿ ಅವರನ್ನು ಪೊಲೀಸರು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ.
ಅತೃಪ್ತ ಶಾಸಕರು ಮುಂಬೈನ ರಿನೈಸೆನ್ಸ್ ಹೋಟೆಲ್ ನಲ್ಲಿ ತಂಗಿದ್ದರಿಂದ ಅವರ ಮನವೊಲಿಸಲು ಸಚಿವ ಡಿಕೆ ಶಿವಕುಮಾರ್, ಶಿವಲಿಂಗೇಗೌಡ, ಜಿಟಿ ದೇವೆಗೌಡರು ಹೋಟೆಲ್ ಬಳಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ತಡೆದ ಪೊಲೀಸರು ನಿಮ್ಮ ಹೆಸರಲ್ಲಿ ರೂಮ್ ಬುಕ್ ಆಗಿದ್ದರೆ ಮಾತ್ರ ಪ್ರವೇಶ ನೀಡುವುದಾಗಿ ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನನ್ನ ಸ್ನೇಹಿತರು ಈ ಹೋಟೆಲ್‍ ನಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಹೊರತು ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ಹೋಟೆಲ್ ಒಳಗೆ ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದ್ದಾರೆ.

 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಮಾನ ನಿಲ್ದಾಣದಲ್ಲಿ ಬ್ಯಾಗ್ ವೈಟ್ ಸರಿದೂಗಿಸಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ಫ್ರಾನ್ಸ್ : ಫ್ರಾನ್ಸ್ ನ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬ್ಯಾಗೇಜ್ ವೈಟ್ ಸರಿದೂಗಿಸಿ ಹೆಚ್ಚುವರಿ ...

news

ಡಿಕೆ ಶಿವಕುಮಾರ್ ರಿಂದ ನಮ್ಮನ್ನು ಕಾಪಾಡಿ! ಮುಂಬೈ ಪೊಲೀಸರಿಗೆ ಮೊರೆಯಿಟ್ಟ ಅತೃಪ್ತ ಶಾಸಕರು

ಬೆಂಗಳೂರು: ರಾಜೀನಾಮೆಯಿತ್ತು ಸಮ್ಮಿಶ್ರ ಸರ್ಕಾರವನ್ನು ತೂಗುಯ್ಯಾಲೆಯಲ್ಲಿಟ್ಟ ಅತೃಪ್ತ ಶಾಸಕರು ಇದೀಗ ಸಚಿವ ...

news

ನಾರ್ಕೋಟಿಕ್ಸ್ ಕ್ರೈಂ ಪೊಲೀಸರ ಬಲೆಗೆ ಬಿದ್ದ ಭೂಪ

ವಿವಿಧ ಠಾಣೆಗಳಲ್ಲಿ 11 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದ ಖತರ್ನಾಕ್ ಖಿಲಾಡಿಯನ್ನು ಬಂಧಿಸುವಲ್ಲಿ ...

news

ವಿಶ್ವಕಪ್ - ಟೀಂ ಇಂಡಿಯಾಗೆ ಆಲ್ ದಿ ಬೆಸ್ಟ್

ಇಂದು ವಿಶ್ವಾದ್ಯಂತ ಕ್ರಿಕೆಟ್ ಜ್ವರ ಹಬ್ಬಿಸಿರುವ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ...