ಮುಂಬೈನಲ್ಲಿ ರೈಲ್ವೇ ಹಳಿ ಮೇಲೆ ಮೇಲ್ಸೇತುವೆ ಕುಸಿತ

ಮುಂಬೈ| Krishnaveni K| Last Modified ಮಂಗಳವಾರ, 3 ಜುಲೈ 2018 (10:05 IST)
ಮುಂಬೈ: ಭಾರೀ ಮಳೆಗೆ ಮುಂಬೈನ ಅಂಧೇರಿ ಸ್ಟೇಷನ್ ಬಳಿ ರೈಲ್ವೇ ಹಳಿಗಳ ಮೇಲ್ಸೇತುವೆ ಕುಸಿದು ಬಿದ್ದಿದ್ದು, 2 ಮಂದಿ ಗಾಯಗೊಂಡಿದ್ದಾರೆ.

ಸೇತುವೆಯಡಿಯಲ್ಲಿ ಇನ್ನೂ 10 ರಿಂದ 15 ಮಂದಿ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಾಂತರ ನಡೆದಿದೆ ಎನ್ನಲಾಗಿದೆ.ರೈಲ್ವೇ ಹಳಿ ಮೇಲೆ ಸೇತುವೆ ಕುಸಿದು ಬಿದ್ದಿರುವುದರಿಂದ ರೈಲ್ವೇ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಸ್ಥಳೀಯ ರೈಲುಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿದೆ. ಇನ್ನು, ಸ್ಥಳಕ್ಕೆ ಎನ್ ಡಿಆರ್ ಎಫ್ ಸಿಬ್ಬಂದಿ ಧಾವಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :