ಸಚಿವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದ ವೇಳೆ ನಗರಸಭೆ ಸದಸ್ಯರೊಂದಿಗೆ ಅಲ್ಲಿನ ಕಿರಿಯ ಇಂಜಿನಿಯರ್ ಒಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ನಗರಸಭೆ ವತಿಯಿಂದ ಸ್ಥಳೀಯ ಶಾಸಕರೂ, ಹಿಂದುಳಿದ ವರ್ಗಗಳ ಸಚಿವರೂ ಆದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಸಭೆ ಆರಂಭವಾಯ್ತು. ಈ ವೇಳೆ ನಗರಸಭಾ ಸದಸ್ಯ ಚಿನ್ನಸ್ವಾಮಿ, ಅಲ್ಲಿನ ಕಿರಿಯ ಇಂಜಿನಿಯರ್ ಬಸವರಾಜು ಅವರನ್ನು