ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಯ ಬಳಿಕ ರಾಜಕೀಯ ಹಿಂಸಾಚಾರ ಮರುಕಳಿಸಿದ್ದು, ಮನೆಗೆ ಬೆಂಕಿ ಹಚ್ಚಲಾಗಿದೆ. ಕಾಸರಗೋಡಿನ ಪೆರಿಯ ಪರಿಸರದಲ್ಲಿ ರಾಜಕೀಯ ಹಿಂಸಾಚಾರ ಮರುಕಳಿಸುತ್ತಿದ್ದು, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.ಬ್ಲಾಕ್ ಸಮಿತಿ ಅಧ್ಯಕ್ಷ ರಾಜನ್ ಪೆರಿಯ ರವರ ಮನೆ ಮೇಲೆ ದಾಳಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಳ್ಳುವಂತೆ ಮಾಡಿದೆ. ಮನೆಯಂಗಳದಲ್ಲಿದ್ದ ಕಾರನ್ನು ಹಾನಿಗೊಳಿಸಲಾಗಿದೆ. ಕಿಟಕಿ ಗಾಜುಗಳನ್ನು ಪುಡಿಗೈದಿರುವ ತಂಡವು ಮನೆಗೆ ಬೆಂಕಿ ಹಚ್ಚಿದ್ದು ವರಾಂಡದಲ್ಲಿದ್ದ ಪೀಠೋಪಕರಣ