ರಾಜ್ಯದ ಪ್ರಖ್ಯಾತ ಸ್ವಾಮೀಜಿಗಳನ್ನು ಹತ್ಯೆ ಮಾಡೋದಾಗಿ ಬೆದರಿಕೆ ಹಾಕಲಾಗಿದೆ. ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳನ್ನು ಜನೇವರಿ 29 ರೊಳಗೆ ಕೊಲೆ ಮಾಡೋದಾಗಿ ಪತ್ರ ಕಳಿಸಲಾಗಿದೆ.ಸ್ವಾಮೀಜಿಗಳ ಕೊಲೆಗೆ ಡೆಡ್ ಲೈನ್ ಫಿಕ್ಸ್ ಮಾಡಿರೋ ಹಂತಕರು, ಒಂದಷ್ಟು ಸ್ವಾಮೀಜಿಗಳಿಗೆ ಮೊಬೈಲ್ ಗೆ ಕರೆ ಮಾಡಿ ಜೀವ ತೆಗೆಯೋದಾಗಿ ಹೆದರಿಕೆ ಹಾಕಿದ್ದಾರೆ.ಚಿತ್ರನಟರು, ಚಿಂತಕರು, ಸಾಹಿತಿಗಳು, ಅಧ್ಯಾಪಕರನ್ನೂ ಕೊಲೆ ಮಾಡೋದಾಗಿ ಪತ್ರದಲ್ಲಿ ತಿಳಿಸಲಾಗಿದೆ.