Widgets Magazine

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮುರುಗೇಶ್ ನಿರಾಣಿ ಸೋದರ

ಬಾಗಲಕೋಟೆ| pavithra| Last Modified ಗುರುವಾರ, 16 ಜನವರಿ 2020 (10:51 IST)
ಬಾಗಲಕೋಟೆ : ತಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸೋದರ ಸಂಗಮೇಶ್ ನಿರಾಣಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್ ನಿರಾಣಿ, ಯತ್ನಾಳ್ ಒಬ್ಬ ಹರಕು ಬಾಯಿ ಮನುಷ್ಯ. ಅಧಿಕಾರ ಇಲ್ಲದಿದ್ದಾಗ ನಮ್ಮ ಮನೆಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಲ್ಲದೆ ನಮ್ಮ ಮನೆಯ ನಾಯಿ, ಬೆಕ್ಕಿನ ಕಾಲು ಹಿಡಿದಿದ್ದ ಎಂದು   ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಅಲ್ಲದೇ ಅಧಿಕಾರ ಇಲ್ಲದಿದ್ದಾಗ ಅವನಿಗೆ ನಮ್ಮ ಕುಟುಂಬ ಸಹಾಯ ಮಾಡಿದೆ. ಮುರುಗೇಶ್ ನಿರಾಣಿ ಅವರು ಯತ್ನಾಳ್ ಗೆ ರಾಜಕೀಯ ಪುನರ್ ಜನ್ಮ ನೀಡಿದ್ದಾರೆ. ಈ ಹಿಂದೆ ಅವನು ಸಿಎಂ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ದವೂ ನಾಲಿಗೆ ಹರಿಬಿಟ್ಟಿದ್ದ. ಈಗ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾನೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎಂದು ಯತ್ನಾಳ್ ಗೆ ಎಚ್ಚರಿಕೆ ನೀಡಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :