ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮ ಸೇನೆ ಸಂಘಟನೆ ನಿಷೇಧ ಮಾಡಿ, ಪರಿಣಾಮ ಎದುರಿಸಲಿ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ. ಪಿಎಫ್ಐ, ಕೆಎಫ್ಡಿ ದೇಶದ್ರೋಹಿ ಸಂಘಟನೆಗಳು. ಅವುಗಳನ್ನು ನಿಷೇಧ ಮಾಡಬೇಕು. ಹಿಂದು ಸಂಘಟನೆಗಳು ದೇಶ ದ್ರೋಹಿ ಸಂಘಟನೆಗಳಲ್ಲ. ಸರ್ಕಾರಕ್ಕೆ ತಾಕತ್ತಿದ್ರೆ ಶ್ರೀರಾಮ ಸೇನೆ ನಿಷೇಧ ಮಾಡಿ, ಪರಿಣಾಮ ಎದುರಿಸಲಿ ಎಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಪಿಎಫ್ಐ ಸಂಘಟನೆಯನ್ನ ಯಾಕೆ ನಿಷೇಧ ಮಾಡಲಿಲ್ಲ ಎಂದು ಪ್ರಶ್ನಿಸಿದ