ಬಾಗಲಕೋಟೆ : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸಂದರ್ಶನವೇ ಬೇಡ ಎಂದು ಬಾಗಲಕೋಟೆಯಲ್ಲಿ ಸೋಮವಾರ(ಇಂದು) ಮಾಧ್ಯಮಗಳಿಗೆ ಕೈ ಮುಗಿದಿದ್ದಾರೆ. ಜೆಡಿಎಸ್ ಪಕ್ಷದ ವರದಿಯನ್ನು ಪ್ರಸಾರ ಮಾಡದಿದ್ದಕ್ಕೆ ಮಾಧ್ಯಮಗಳ ವಿರುದ್ದ ತೀವ್ರ ಬೇಸರ ವ್ಯಕ್ತಪಡಿಸಿದ ಅವರು ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ಪಕ್ಷದ ವರದಿಯನ್ನು ಬಿತ್ತರಿಸುತ್ತಿಲ್ಲ. ನನ್ನ ಸುದ್ದಿಯನ್ನು ಡಸ್ಟ್ ಬಿನ್ ಗೆ ಹಾಕಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಬಗ್ಗೆ ಮಾತ್ರ ಸುದ್ದಿಪ್ರಸಾರ ಮಾಡಲಾಗ್ತಿದೆ. ಆದರೆ ಜೆಡಿಎಸ್ ಪಕ್ಷದ ಬಗ್ಗೆ ಸುದ್ದಿ ಪ್ರಸಾರ