ಆ ಕೆರೆಯ ಹೆಸರು ಮೃತ್ಯುಂಜಯ. ಆದರೆ ಅದು ಬಾಲಕರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಧಾರವಾಡದ ಕಲಘಟಗಿಯ ಮೃತ್ಯುಂಜಯ ಕೆರೆ( ರುಸ್ತುಂಸಾಬ್ ) ಕೆರೆಯಲ್ಲಿ ಘಟನೆ ನಡೆದಿದೆ. ದುಮ್ಮವಾಡ ಗ್ರಾಮದ ವಿನಯ ಕುಂಬಾರ (15), ಅನುಫ್ ಹುಬ್ಬಳ್ಳಿ (15) ಮೃತಪಟ್ಟವರು. ಇಬ್ಬರೂ ದುಮ್ಮವಾಡದ ಆದರ್ಶ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ.ಇಬ್ಬರ ಶವಗಳು ಇನ್ನು