Widgets Magazine

ಮೈಸೂರು ನಿಗೂಢ ಸ್ಫೋಟ: ಕೆಆರ್‌ಎಸ್‌ ಜಲಾಶಯಕ್ಕೆ ಭಾರಿ ಭದ್ರತೆ!

ಮಂಡ್ಯ| Vinod| Last Modified ಬುಧವಾರ, 3 ಆಗಸ್ಟ್ 2016 (10:24 IST)
ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ಸಂಭವಿಸಿರುವ ನಿಗೂಢ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಸುಪ್ರಸಿದ್ಧ ಕೃಷ್ಣರಾಜನಾಗರ ಜಲಾಶಯಕ್ಕೆ ಬೀಗಿ ಭದ್ರತೆ ನೀಡಿದ್ದಾರೆ.

ಜಲಾಶಯದ ಸುತ್ತ ಮುತ್ತ ಪೊಲೀಸ್ ಭದ್ರತೆ ಮಾಡಲಾಗಿದ್ದು, ವೀಕ್ಷಣೆಗೆ ಬರುವ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮೈಸೂರು ನ್ಯಾಯಾಲಯದ ಕಕ್ಷಿದಾರರು ಬಳಸುವ ಶೌಚಾಲಯದಲ್ಲಿ ಸಂಭವಿಸಿರುವ ನಿಗೂಢ ಸ್ಫೋಟದ ಕುರಿತ ಪರಿಶೀಲನೆಯಲ್ಲಿ
ಸುಧಾರಿತ ಸ್ಫೋಟಕಗಳನ್ನು ಬಳಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸ್ವಾತಂತ್ರ್ಯೊತ್ಸವ ಹಾಗೂ ದಸರೆಯಲ್ಲಿ ಉಗ್ರರು ಭಾರಿ ಪ್ರಮಾಣದ ಸ್ಫೋಟ ನಡೆಸಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್
ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :