ಜಗತ್ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತ್ರಿಭಾಷಾ ವಚನ ಗಾಯನ ಎಲ್ಲರ ಗಮನ ಸೆಳೆಯಿತು. ಕಲಬುರಗಿಯ ಜಿ.ಚಂದ್ರಕಾಂತ್ ಅವರ ತ್ರಿಭಾಷಾ ವಚನ ಗಾಯನ ಮೈಸೂರು ದಸರಾದಲ್ಲಿ ಗಮನ ಸೆಳೆಯಿತು. ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲರ ಮನಸೂರೆಗೊಂಡರು. ಪ್ರಾರಂಭದಲ್ಲಿ ಉಳ್ಳವರು ಶಿವಾಲಯ ಮಾಡುವರು...... ವಚನವನ್ನು ಮಧುವಂತಿ ರಾಗದಲ್ಲಿ ಸುಮಧುರವಾಗಿ ಹಾಡಿದರು.ನಂತರ ಕಲಾವತಿ ರಾಗದಲ್ಲಿ ನಾದಪ್ರಿಯ ಶಿವನೆಂಬುವರು...,