ಮೈಸೂರು: ಯದುವಂಶದ ಅರಸರಿಗೆ ಬಳುವಳಿಯಾಗಿ ಬಂದ ವಿಜಯನಗರ ಅರಸರ ಕಾಲದ ರತ್ನಖಚಿತ ಸಿಂಹಾಸನ ಅಂಬಾವಿಲಾಸ ಅರಮನೆಯಲ್ಲಿ 2 ವರ್ಷದ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿದೆ. ಒಡೆಯರ್ ಮನೆತನದ ಸುಪರ್ದಿಯಲ್ಲಿರುವ ವಜ್ರ ವೈಢೂರ್ಯಗಳಿಂದ ಕೂಡಿದ ಈ ಸಿಂಹಾಸನ ಕಳೆದ ವರ್ಷ ದಸರಾ ಸಮಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿಲ್ಲ. ಆದರೆ ಈ ಬಾರಿ ರಾಜವಂಶಸ್ಥರು ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಸೆ.30ರವರೆಗೆ ರತ್ನಖಚಿತ ಸಿಂಹಾಸನ ದರ್ಶನಕ್ಕೆ ಲಭಿಸಲಿದೆ. ಅಧಿಕಾರ, ಘನತೆ, ಗಾಂಭೀರ್ಯ, ಪ್ರತಿಷ್ಠೆಯ ಸಂಕೇತವಾದ