ಗರಿಗೇದರಿದ ಲೋಕಸಭಾ ಚುನಾವಣೆ ಕಣದಲ್ಲಿ ದಿನಕ್ಕೊಂದು ಕುತೂಹಲದ ವಿಷಯ ಹೊರಬೀಳುತ್ತಿದೆ.ಕಾಂಗ್ರೆಸ್ ತೆಕ್ಕೆಗೆ ಮೈಸೂರು ಕೊಡಗು ಕ್ಷೇತ್ರ ಬೀಳುವ ಸಾಧ್ಯತೆ ದಟ್ಟವಾಗತೊಡಗಿದೆ. ಟಿಕೆಟ್ ಹಂಚಿಕೆಗಾಗಿ ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ.ಮೈಸೂರು ಕೊಡಗು ಕ್ಷೇತ್ರಕ್ಕಾಗಿ ತೀವ್ರ ಒತ್ತಡ ಹಾಕುತ್ತಿರುವ ಸೂರಜ್ ಹೆಗ್ಡೆ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.ಸೂರಜ್ ಹೆಗ್ಡೆ, ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗರಾಗಿದ್ದಾರೆ. ದೆಹಲಿಯಲ್ಲೆ ಬೀಡುಬಿಟ್ಟ ಸೂರಜ್ ಹೆಗ್ಡೆ ಹಾಗೂ ಕಾಂಗ್ರೆಸ್ ಮುಖಂಡರ