ಮೈಸೂರು: ರಾಜ್ಯದಲ್ಲಿ ಮಂತ್ರಿ ಮಾಡಿದ್ದರೆ ರಾಜ್ಯ ಸುತ್ತುತ್ತಿದ್ದೆ. ನನಗೆ ಕೇವಲ ಕೆ.ಆರ್ ಕ್ಷೇತ್ರಕ್ಕೆ ಸೀಮಿತ ಮಾಡಿದ್ದಾರೆ. ಅದಕ್ಕೆ ಮಾತ್ರ ಸೀಮಿತಗೊಂಡು ಕೆಲಸ ಮಾಡುತ್ತೇನೆ ಎಂದು ಮೈಸೂರು ಬಿಜೆಪಿ ಶಾಸಕ ಎಸ್.ಎ. ರಾಮದಾ ಸ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರೇ ನನಗೆ ಕರೆ ಮಾಡಿ ನಿಮಗೆ ಸಚಿವ ಸ್ಥಾನ ಕೊಡಬೇಕೆಂದು ಸಂಘ ಪಕ್ಷ ಸೂಚಿಸಿದೆ ಎಂದು ಹೇಳಿದ್ದರು. ಅಲ್ಲದೇ ಸಚಿವರ ಪಟ್ಟಿಯಲ್ಲೂ ಮೊದಲ