ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ವಿಜಯದಶಮಿಯ ಜಂಬೂ ಸವಾರಿಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಇಂದು ಮುಂಜಾನೆ ರಾಜಮನೆತನದವರು ಯದುವಂಶದ ಶಾಪ ವಿಮೋಚನೆಗಾಗಿ ಅರಮನೆಯ ಅಲಮೇಲಮ್ಮನಿಗೆ ವಿಶೇಷ ಪೂಜೆ ಪುರಸ್ಕಾರ ಸಲ್ಲಿಸಿದರು. ಈ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇಂದು ಸಂಜೆ ವೇಳೆಗೆ ನಾಡಿನ ಅಧಿದೇವತೆ ಚಾಮುಂಡಿಯನ್ನು ಹೊತ್ತು ಅರ್ಜುನ ತನ್ನ ಜೊತೆಗಾರರೊಂದಿಗೆ ಅರಮನೆ ನಗರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ. ಕೋಟ್ಯಾಂತರ ಜನರು ಐತಿಹಾಸಿಕ