ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಸೈಕಲ್ ಕೊಂಡೊಯ್ಯಲು ಬಿಎಂಆರ್ ಸಿಎಲ್ (BMRCL) ಅನುಮತಿ ನೀಡಿದೆ. ಈ ಮೂಲಕ ಪ್ರಯಾಣಿಕರಿಗೆ ಬಂಪರ್ ಸುದ್ದಿ ನೀಡಿದೆ. ಮಡಚಬಹುದಾದ ಸೈಕಲ್ ಅನ್ನು (Folding Bicycle) ಮೆಟ್ರೋದ ಕೊನೆಯ ಭೋಗಿಯಲ್ಲಿ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. 60 mm × 45 mm × 25 mm ನ 15 kg ತೂಕದವರೆಗಿನ ಸೈಕಲ್ ಅನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಬಹುದಾಗಿದೆ. ಸೈಕಲ್ ಗೆ ಯಾವುದೇ ಲಗೇಜ್ ಚಾರ್ಜ್ ಇರುವುದಿಲ್ಲ.