ನಮ್ಮ ಮೆಟ್ರೋ ಸ್ಟೇಶನ್ನಲ್ಲಿ ಮ್ಯೂಜಿಕ್ ಮತ್ತು ಹಕ್ಕಿಗಳ ಕಲರವದ ಸಂಗೀತವನ್ನು ಹಾಕಲಾಗುತ್ತಿತ್ತು. ಇದೀಗ ನಿಲ್ದಾಣಗಳಲ್ಲಿ ದೇಶಭಕ್ತಿಯ ಕನ್ನಡ ಗೀತೆಗಳನ್ನು ಹಾಕಲಾಗುತ್ತಿರುವುದು ಕನ್ನಡಿಗರಿಗೆ ಸಂತಸ ತಂದಿದೆ. ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕನ್ನಡ ದೇಶಭಕ್ತಿಯ ಗೀತೆಗಳನ್ನು ಹಾಕಲು ಆರಂಭಿಸಿರುವ ಮೆಟ್ರೋ ಅಧಿಕಾರಿಗಳ ಕಾರ್ಯವೈಖರಿಗೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಮೆಟ್ರೋ ಕೇವಲ ಹಿಂದಿ ಭಾಷೆಗೆ ಆದ್ಯತೆ ನೀಡುತ್ತಿದೆ ಎನ್ನುವ ಆರೋಪಗಳ ಮಧ್ಯೆ, ರೈಲು ನಿಲ್ದಾಣಗಳಲ್ಲಿ ಕನ್ನಡ ದೇಶಭಕ್ತಿಯ