ಬೆಂಗಳೂರು: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಆರಂಭವಾಗಿರುವಂತೆಯೇ ಮೆಟ್ರೋ ರೈಲು ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಿದೆ. ಮೆಟ್ರೋ ರೈಲು ಈ ಮೊದಲು ರಾತ್ರಿ10 ಕ್ಕೆ ಕೊನೆಗೊಳ್ಳುತ್ತಿದ್ದು, ಇನ್ನು ಮುಂದೆ ರಾತ್ರಿ 11.25ರವರೆಗೂ ಲಭ್ಯವಾಗಲಿದೆ ಎಂದು ಅಧಿಕಾಗಿಳು ತಿಳಿಸಿದ್ದಾರೆ. ಆದರೆ ದಿನದ ಈ ಕೊನೆ ರೈಲು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಮಾತ್ರ ಬಿಡಲಿದ್ದು ನಗರದ ನಾಲ್ಕು ದಿಕ್ಕುಗಳಿಗೂ ಸಂಚಾರ ಸಾಧ್ಯವಾಗಲಿದೆ. ಜೂನ್