ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಪಾರ್ಟಿ-ಗೀರ್ಟಿ ಮಾಡಿಕೊಂಡು ಸೆಲೆಬ್ರೇಷನ್ ಮಾಡುವ ಪ್ಲ್ಯಾನ್ ಇದ್ದರೆ ನಮ್ಮ ಮೆಟ್ರೊ ಕಡೆಯಿಂದ ನಿಮಗೆ ಗುಡ್ ನ್ಯೂಸ್ ಕಾದಿದೆ.ಹೊಸ ವರ್ಷಾಚರಣೆ ಮಾಡಿಕೊಳ್ಳುವವರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೊ ಸೇವೆಯನ್ನು ಡಿಸೆಂಬರ್ 31 ರಂದು ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲು ನಮ್ಮ ಮೆಟ್ರೊ ತೀರ್ಮಾನಿಸಿದೆ. ಸಾಮಾನ್ಯವಾಗಿ ರಾತ್ರಿ 11.30 ರವರೆಗೆ ಮೆಟ್ರೊ ಸೇವೆಯಿರುತ್ತದೆ. ಆದರೆ ಈ ದಿನ ಮಾತ್ರ ವಿಶೇಷವಾಗಿ ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಣೆಯಾಗಲಿದೆ.ಆದರೆ ಪ್ರಯಾಣಿಕರ