ಟ್ರಿಪ್ ಟಿಕೆಟ್ಗಳನ್ನು ನೀಡುವ ಯೋಜನೆ ಜಾರಿಗೆ ತರಲು ಬೆಂಗಳೂರು ಮೆಟ್ರೋ ಮುಂದಾಗಿದೆ. ಹಾಗೂ ಸಾರ್ವಜನಿಕ ಟಿಕೆಟ್ ಕೌಂಟರ್ಗಳಲ್ಲಿ ಜನದಟ್ಟಣೆಯನ್ನು ತಗ್ಗಿಸಲು ಹಾಗೂ ವಿಭಿನ್ನ ಟಿಕೆಟಿಂಗ್ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಪರಿಚಯಿಸುವುದು ನಮ್ಮ ಮೆಟ್ರೋ ಉದ್ದೇಶವಾಗಿದೆ.ಮಾ. 2022 ರಿಂದ ಟ್ರಿಪ್ ಟಿಕೆಟ್ ಗಳು ಜಾರಿಗೆ ಬರಲಿದೆ. ಮೆಟ್ರೋ ಕಾರ್ಡ್ ಗಳ ಮಾದರಿಯಲ್ಲೇ ಇರಲಿರುವ ಟ್ರಿಪ್ ಟಿಕೆಟ್ ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್ ಗಳನ್ನು ಹೊಂದಿರುತ್ತವೆ.