ನವದೆಹಲಿ-ಬಿಜೆಪಿಗೆ ಪಂಚರಾಜ್ಯಗಳ ಸೆಮಿಫೈನಲ್ ಗೆದ್ದ ಬಳಿಕ ಈ ಬಾರಿಯ ೨೦೨೪ರ ಫೈನಲ್ ಗೆಲ್ಲೋದು ಬಹುತೇಕ ಪಕ್ಕಾ ಅನ್ನುವ ಪ್ರಚಂಡ ಆತ್ಮವಿಶ್ವಾಸ ಬಂದಿದೆ.. ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್ಘಡದಲ್ಲಿ ಕಮಲ ಅರಳಿದ ಬಳಿಕ ದೇಶದಲ್ಲಿ ನಮೋ ಅಲೆ ಕಡಿಮೆ ಆಗಿಲ್ಲ ಅನ್ನೋದು ಕನ್ಫರ್ಮ್ ಆಗಿ ಬಿಟ್ಟಿದೆ.ಕಾಂಗ್ರೆಸ್ ಪಂಚರಾಜ್ಯಗಳಲ್ಲಿ ಮಕಾಡೆ ಮಲಗಿದ್ದೆ ಮೋದಿಯ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಯಾವುದೇ ಕ್ಷಣದಲ್ಲಿ ಎಲೆಕ್ಷನ್ ನಡೆದರೂ ಮತ್ತೇ ಎನ್ಡಿಎಗೆ ಅಧಿಕಾರ ಸಿಗಲಿದೆ ಅಂತ ಸ್ವತಃ ಬಿಜೆಪಿಯ ನಾಯಕರಿಗೆ ಗೊತ್ತಾಗಿ ಬಿಟ್ಟಿದೆ.