ಪೆಟ್ರೋಲ್ ಬೆಲೆ ಇಳಿಕೆ ಖುಷಿಯಲ್ಲಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟುತ್ತಿದೆ. ಇಂದಿರನಿಂದಲೇ ನಂದಿ ಹಾಲು ಮತ್ತು ಮೊಸರಿನ ದರ ಪ್ರತೀ ಲೀಟರ್`ಗೆ 2 ರೂ. ಏರಿಕೆಯಾಗುತ್ತಿದೆ. ಕೆಎಂಎಫ್ ಸಭೆಯಲ್ಲಿ ಹಾಲಿನ ದರ ೇರಿಕೆಗೆ 2 ದಿನಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಹೈನುಗಾರಿಕೆಗೆ ರೈತರು ಬಳಸುವ ಪಶು ಆಹಾರ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಬರಗಾಲದಿಂದ ತತ್ತರಿಸಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ಏರಿಕೆ ಮಾಡಲಾಗಿದೆ.