ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಸಿಗರೆಟ್ ಪ್ಯಾಕ್ನಲ್ಲಿ ಡ್ರಗ್ಸ್ ಅಡಗಿಸಿ ಪೂರೈಸುತ್ತಿದ್ದ ರೌಡಿ ಅಕ್ಬಿಬ್ ಪಾಷ ಹಾಗೂ ಆತನ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರ ಸಮೀಪದ ಎಂ.ಎಸ್.ಪಾಳ್ಯದ ನಿವಾಸಿ ಅಕ್ಬಿಬ್ ಪಾಷ ಹಾಗೂ ಪ್ರದೀಪ್ ಬಂಧಿತರಾಗಿದ್ದು ಆರೋಪಿಗಳಿಂದ .15 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಮೂರು ಮೊಬೈಲ್ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸೋಲದೇವನಹಳ್ಳಿ ಬಳಿ ಡ್ರಗ್ಸ್ ಮಾರಾಟಕ್ಕೆ ತನ್ನ ಸಹಚರ ಪ್ರದೀಪ್ ಜತೆ ಪಾಷ ಸಜ್ಜಾಗಿರುವ