ಬೆಂಗಳೂರು : ಕರ್ನಾಟಕ ಕುರುಕ್ಷೇತ್ರ ಪ್ರಚಾರ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದಾರೆ. ಬೆಂಗಳೂರಿನ ನೈಸ್ ರೋಡ್ ಜಂಕ್ಷನ್ನಿಂದ ಸುಮನಹಳ್ಳಿಯವರೆಗೆ ಅದ್ಧೂರಿಯಾಗಿ ರೋಡ್ ಶೋ ನಡೆಯಿತು. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 5 ಕಿ.ಮೀನಲ್ಲಿ ರೋಡ್ ಶೋ ನಡೆಸಿದರು. ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಯಲಹಂಕ, ದಾಸರಹಳ್ಳಿ, ಆರ್.ಆರ್ ನಗರ, ಯಶವಂತಪುರ, ಬ್ಯಾಟರಾಯನಪುರ, ಪುಲಿಕೇಶಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಬಿಜೆಪಿ ಚಿಹ್ನೆ ಇರುವ ಪೇಟ ಧರಿಸಿ