ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ ಅಂತಾ ಸುಧಾಕರ್ ತಿಳಿಸಿದ್ರು. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 10 ಗಂಟೆಗಳ ಅವಧಿಯಲ್ಲಿ 2 ಕೋಟಿ 50 ಲಕ್ಷ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ 30 ಲಕ್ಷ ಗುರಿಯನ್ನು ನೀಡಲಾಗಿತ್ತು. 31 ಲಕ್ಷಕ್ಕೂ ಹೆಚ್ಚು ಲಸಿಕೆ ಕೊಡಲಾಗಿದೆ. 14 ಜಿಲ್ಲೆಗಳಲ್ಲಿ ಕೊಟ್ಟ ಟಾರ್ಗೆಟ್ ಗೂ ಹೆಚ್ಚು ಮಾಡಲಾಗಿದೆ. ಅತೀ ಹೆಚ್ಚು ಲಸಿಕೆ ಕೊಟ್ಟ