Widgets Magazine

ಅನರ್ಹರು ಅಂದ್ರೆ ಎಂ ಎಲ್‌ ಎ ಆಗುವುದಕ್ಕೆ ನಾಲಾಯಕ್ ಎಂದ ಸಿದ್ದರಾಮಯ್ಯ

ಅಥಣಿ| Jagadeesh| Last Modified ಶುಕ್ರವಾರ, 29 ನವೆಂಬರ್ 2019 (16:34 IST)
ಅನರ್ಹರು ಅಂದ್ರೆ ಎಂಎಲ್‌ಎ ಆಗುವುದಕ್ಕೆ ನಾಲಾಯಕ್ ಅಂತಾನೇ ಅರ್ಥ. ನಾಲಾಯಕ... ನಾಲಾಯಕ... ಈ ನಾಲಾಯಕ ಮನುಷ್ಯ ಪುನಃ ನನ್ನ ಲಾಯಕ್ ಮಾಡು ಅಂತಾ ಜನರ ಬಳಿ ಬರ್ತಾ ಇದ್ದಾನೆ. ಹೀಗಂತ ಮಾಜಿ ಸಿಎಂ ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಅಥಣಿ ತಾಲೂಕಿನ ತೆಲಸಂಗದಲ್ಲಿ ಮಾಜಿ‌ ಸಿಎಂ ಸಿದ್ದರಾಮಯ್ಯನವರು, ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ,  ಈ‌ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. 2023 ರ ವರೆಗೆ ಮಹೇಶ ಕುಮಠಳ್ಳಿ ಶಾಸಕನಾಗಿ ಇರಬೇಕಿತ್ತು. ಆದರೆ ಒಂದೂವರೆ ವರ್ಷದಲ್ಲೇ 15  ಕಡೆ ಚುನಾವಣೆ ನಡೀತಿದೆ. ಈ ಚುನಾವಣೆಯಿಂದ ಲಾರಿಗೆ ಲಾಭ? ಎಂದ್ರು.

ಈ ಚುನಾವಣೆಯಿಂದ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲಗೆ ಲಾಭ ಆಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಬೇರೆ ಪಕ್ಷಕ್ಕೆ ಹೋಗಿದ್ದೇನೆ ಅನ್ನೋದರಷ್ಟು ಹಸಿ ಸುಳ್ಳು ಬೇರೆ ಇಲ್ಲ. ಇವರೆಲ್ಲ‌ ಮಾರಾಟ ಆಗಿ ಹೋಗಿದ್ದಾರೆ. ಸಂತೆಯಲ್ಲಿ ಎಮ್ಮೆ, ಕರು, ಕುರಿ, ಕೋಳಿ ಮಾರಾಟ ಆಗುವಂತೆ ನೀವು ಎಂಎಲ್‌ಎ ಗಳೇ ಮಾರಾಟ ಆಗಿ‌ ಹೋಗ್ತಿರಲ್ಲ? ಇವರು ಬಿಜೆಪಿಗೆ ಹೋಗುವಾಗ ಜನರನ್ನು ಕೇಳಿದ್ರಾ? ಮತ ಕೊಟ್ಟವರನ್ನೇ ಕೇಳದೆ ಸ್ವಾರ್ಥ, ಅಧಿಕಾರದ ಲಾಲಸೆ ಮತ್ತು ಹಣಕೋಸ್ಕರ ಹೋಗಿದ್ದಾರೆ ಎಂದು ಜರಿದ್ರು.

 

 
ಇದರಲ್ಲಿ ಇನ್ನಷ್ಟು ಓದಿ :