ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ರಾಷ್ಟ್ರೀಯ ಕಾಮನ್ ಮೊಬಿಲಿಟಿ ಕಾರ್ಡ್ ಪರಿಚಯಿಸಿದೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾತ್ರ ರಾಷ್ಟ್ರೀಯ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಇನ್ನೂ ಅಳವಡಿಸಿಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ.ಒಂದೇ ಕಾರ್ಡಿನಲ್ಲಿ ಹಲವು ಸೇವೆಗಳನ್ನು ಒದಗಿಸುವ ಈ ರಾಷ್ಟ್ರೀಯ ಕಾಮನ್ ಮೊಬಿಲಿಟಿ ಕಾರ್ಡ್ ಅನುಷ್ಠಾನ ಬಗ್ಗೆ ಬಿಎಂಟಿಸಿ ಇನ್ನೂ ಚರ್ಚೆಯ ಹಂತದಲ್ಲಿದೆ. ಬಿಎಂಟಿಸಿ ಮತ್ತು ಮೆಟ್ರೊವನ್ನು ಸಂಯೋಜಿಸಬೇಕು ಮತ್ತು ಪ್ರತಿಸ್ಪರ್ಧಿಗಳಾಗಬಾರದು, ಪರಸ್ಪರ ಪೂರಕವಾಗಿರಬೇಕು ಎಂಬ