ಸಂಕಷ್ಟದಲ್ಲಿರುವ ರಾಜ್ಯದ ಪ್ರವಾಸಿಗರಿಗೆ ಅಗತ್ಯ ನೆರವು: ಸಂಸದ ಪ್ರಲ್ಹಾದ ಜೋಶಿ

ಹುಬ್ಬಳ್ಳಿ| Jagadeesh| Last Updated: ಮಂಗಳವಾರ, 3 ಜುಲೈ 2018 (16:33 IST)
ಮಾನಸ ಸರೋವರ ಯಾತ್ರೆಗೆ ತೆರಳಿ ನೇಪಾಳದ ಸೀಮಿಕೋಟದಲ್ಲಿ ಭಾರಿ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯ ದ ಪ್ರವಾಸಿಗರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಲ್ಲ ಅಗತ್ಯ ನೆರವು ಒದಗಿಸಲಾಗುವದು ಎಂದು ಪ್ರಹ್ಲಾದ ಜೋಶಿಯವರು ಹುಬ್ಬಳ್ಳಿಯಲ್ಲಿ ನುಡಿದರು.


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,
ಪ್ರವಾಸಿಗರ ಕುಟುಂಬದವರು ಯಾವುದೇ ರೀತಿಯ ಭೀತಿ ಪಡುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಅವರು ಅಭಯ ನೀಡಿದರು.
ನೇಪಾಳದ ಸಿಮಿಕೋಟದಲ್ಲಿ ಸಂಕಷ್ಟದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲಾಗುತ್ತದೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :