ಪ್ರವಾಹ ಪರಿಸ್ಥಿತಿ ಗಡಿ ಜಿಲ್ಲೆಯ ಜನರ ಬದುಕನ್ನು ನರಕವಾಗಿಸಿದರೆ, ನೆರೆ ಇಳಿಯುತ್ತಿರುವ ಕೆಲವೆಡೆ ಮೊಸಳೆಗಳು ಜೀವ ಭಯ ಹುಟ್ಟಿಸುತ್ತಿವೆ.ಜನ ವಸತಿಯಡೆ ಮೋಸಳೆಗಳು ಕಂಡು ಬರುತ್ತಿರೋದು ಜನರಲ್ಲಿ ಆತಂಕ ಉಂಟು ಮಾಡಿದೆ. ಕೃಷ್ಣಾ ನದಿಯ ಪ್ರವಾಹಕ್ಕೆ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾದ ಪರಿಣಾಮ ಆಹಾರ ಅರಸುತ್ತಾ ಜನವಸತಿ ಪ್ರದೇಶದತ್ತ ಮೊಸಳೆಗಳು ಬರುತ್ತಿವೆ. ಇವುಗಳನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.ಸತ್ತಿ