ಆ ಗ್ರಾಮಗಳಲ್ಲಿ ಸಂಜೆಯಾದರೆ ಸಾಕು ಕವಿಯುವ ಕತ್ತಲೆ, ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟ, ಉಸಿರಾಡುವ ಗಾಳಿಯೂ ವಿಷಗಾಳಿಯಿಂದ ಕಲುಷಿತ, ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಳವರೆಗೆ ನಿತ್ಯದ ಅಲೆದಾಟ.ಬೆಳಗಾವಿ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಆವರಿಸಿದ್ದ ಬರದ ಗಾಯದ ಮೇಲೆ ಉಪ್ಪು ಸುರಿದಂತೆ ಕಳೆದ ಇಪ್ಪತ್ತು ದಿನಗಳಲ್ಲಿ ಪ್ರವಾಹದ ಭೀಕರತೆಯನ್ನು ತಂದ ವರುಣ ಅಕ್ಷರಶಃ ಕೃಷ್ಣಾ ನದಿ ತೀರದ ನೆರೆ ಸಂತ್ರಸ್ಥರನ್ನು ಬೀದಿಗೆ ತಳ್ಳಿದ್ದಾನೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ-ನಿಪ್ಪಾಣಿ ರಾಜ್ಯ