ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವ ‘ಹೊಂಬಾಳೆ ಫಿಲ್ಮ್ಸ್ ’ಈಗ ಹೊಸ ಹೆಜ್ಜೆ ಇಟ್ಟಿದೆ. ‘ಕೆಜಿಎಫ್:ಚಾಪ್ಟರ್ 2’, ‘ಸಲಾರ್’ ಮುಂತಾದ ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ನಿರ್ಮಾಪಕ ವಿಜಯ್ ಕಿರಗಂದೂರ ಅವರು ಇಡುತ್ತಿರುವ ಎಲ್ಲ ಹೆಜ್ಜೆಗಳೂ ಕೂಡ ಹೊಸ ಮೈಲಿಗಲ್ಲನ್ನು ಸೃಷ್ಟಿಮಾಡುತ್ತಿವೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಜೊತೆ ‘ಹೊಂಬಾಳೆ ಫಿಲ್ಮ್ಸ್’ ಕೈಜೋಡಿಸಿದೆ. ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ