ಕೇಂದ್ರ ಸರಕಾರ ನನ್ನ ಮತ್ತು ನನ್ನ ಪತ್ನಿ ಹಾಗೂ ಪುತ್ರನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಫೋನ್ ಟ್ಯಾಪ್ ಮಾಡಲಾಗಿದೆ. ನಮ್ಮ ಕುಟುಂಬದ ಸದಸ್ಯರ ಫೋನ್ಗಳಲ್ಲದೇ ನಮ್ಮ ಕುಟುಂಬದ ವಕೀಲರು ಮತ್ತು ಅವರ ಪತ್ನಿಯ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗುತ್ತಿದೆ. ನನ್ನ 11 ಮಂದಿ ಆಪ್ತರ ಫೋನ್ಗಳನ್ನು ಕೂಡಾ ಟ್ಯಾಪ್ ಮಾಡಲಾಗಿದೆ| ಎಂದು ಆರೋಪಿಸಿದ್ದಾರೆ.