ಕರ್ನಾಟಕ ಹೈಕೋರ್ಟ್‌ಗೆ ಹೊಸ ಸಿಜೆ

ಬೆಂಗಳೂರು| Ramya kosira| Last Modified ಭಾನುವಾರ, 10 ಅಕ್ಟೋಬರ್ 2021 (12:01 IST)
ಬೆಂಗಳೂರು : ಕರ್ನಾಟಕ ಹೈಕೋರ್ಟ್ಗೆ ಮುಖ್ಯನ್ಯಾಯಮೂರ್ತಿಗಳನ್ನಾಗಿ ರಿತುರಾಜ್ ಅವಸ್ಥಿ ಅವರನ್ನು ನೇಮಿಸಲಾಗಿದೆ. ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಸತೀಶ್ ಚಂದ್ರ ಅವರನ್ನು ತೆಲಂಗಾಣ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.> ರಿತುರಾಜ್ ಅವರು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. 1960ರಲ್ಲಿ ಹುಟ್ಟಿರುವ ನ್ಯಾ.ರಿತುರಾಜ್ ಅವರು, ಲಖನೌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಮುಗಿಸಿದ್ದು, 1987ರಿಂದ ವಕೀಲಿ ವೃತ್ತಿ ಕೈಗೊಂಡಿದ್ದರು. ಅಲಹಬಾದ್ ಹೈಕೋರ್ಟ್ನ ಲಖನೌ ಪೀಠದಿಂದ ಇವರು ವೃತ್ತಿ ಆರಂಭಿಸಿದ್ದಾರೆ. 2009ರಲ್ಲಿ ಲಖನೌ ಪೀಠದಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡು 2010ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದಾರೆ.> ಇದೇ ವೇಳೆ ಕರ್ನಾಟಕದ ನ್ಯಾಯಮೂರ್ತಿಯಾಗಿದ್ದ ಅರವಿಂದ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಸೇರಿದಂತೆ ಇದೇ ವೇಳೆ ದೇಶದ 8 ರಾಜ್ಯಗಳ ಹೈಕೋರ್ಟ್ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ನಡೆದಿದೆ.
ಉಳಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದವರು:
ಅಲಹಾಬಾದ್- ನ್ಯಾ.ರಾಜೇಶ್ ಬಿಂದಾಲ್
ಮೇಘಾಲಯ- ನ್ಯಾ.ರಂಜಿತ್ ವಿ. ಮೊರೆ
ಕೋಲ್ಕತಾ- ನ್ಯಾ.ಪ್ರಕಾಶ್ ಶ್ರೀವಾಸ್ತವ
ಮಧ್ಯಪ್ರದೇಶ- ನ್ಯಾ. ಆರ್.ವಿ. ಮಳೀಮಠ
ಆಂಧ್ರಪ್ರದೇಶ- ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ
 ಇದರಲ್ಲಿ ಇನ್ನಷ್ಟು ಓದಿ :