ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಬದಲು ರಾಜ್ಯ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಅವು ಯಾವುವು ನೋಡೋಣ. ಇಂದು ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ಭಾನುವಾರ ದಿನವಿಡೀ ಕರ್ಫ್ಯೂ ಜಾರಿಯಲ್ಲಿರಲಿದೆ. ಥಿಯೇಟರ್, ಶಾಲೆ, ಕಾಲೇಜು ಎಲ್ಲವೂ ಬಂದ್ ಆಗಿರಲಿದೆ. ಕೇವಲ ತುರ್ತು ಸೇವೆ, ಅಗತ್ಯ ವಸ್ತು ಹೊರತುಪಡಿಸಿ ಉಳಿದ ಸೇವೆಗಳಿರಲ್ಲ.