ಚಾಮರಾಜನಗರ : ಕನ್ನಡ ಅಕ್ಷರ ಶೈಲಿಗೆ ಬಂಡೀಪುರ ಹೆಸರಿನ ಹೊಸ ಫಾಂಟ್ ಸೇರ್ಪಡೆಗೊಂಡಿದೆ.ಟಿ.ನರಸೀಪುರ ಮೂಲದ ಅನಿಮೇಷನ್ ಕೋರ್ಸ್ ಹಾಗು ಗ್ರಾಫಿಕ್ ಡಿಸೈನ್ ಶಿಕ್ಷಕ ಆರ್.ಮಂಜುನಾಥ್ ಬಂಡೀಪುರ ಹೆಸರಿನಲ್ಲಿ ಕನ್ನಡಕ್ಕೆ ಮತ್ತೊಂದು ಹೊಸ ಯುನಿಕೋಡ್ ಫಾಂಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದ್ದಾರೆ. ಆನೆಗಳಿಂದ ಪ್ರೇರಣೆಮಂಜುನಾಥ್ ಅವರು ತಮ್ಮ ಅಕ್ಷರ ಟೈಪ್ ಸ್ಟುಡಿಯೋದಿಂದ ಬಂಡೀಪುರ ಹೆಸರಿನಲ್ಲಿ ಹೊಸ ಫಾಂಟ್ ಬಿಡುಗಡೆ ಮಾಡಿದ್ದು, ಬಂಡೀಪುರದ ಆನೆಗಳಿಂದ ಪ್ರೇರಣೆಗೊಂಡು ಫಾಂಟ್ ರಚಿಸಿದ್ದಾರೆ. ಫಾಂಟ್ ಚೂಪಾದ ಅಂಚುನ್ನು ಎಷ್ಟು ಬೇಕಾದರು