ಕೆಸರು ಗದ್ದೆಯಾದ ಗ್ರಾಮದ ರಸ್ತೆ… ಹದಗೆಡುತ್ತಿರುವ ಸಂಚಾರ… ಇದರಿಂದ ರೋಸಿ ಹೋದ ಗ್ರಾಮಸ್ಥರು ರಸ್ತೆಯಲ್ಲಿಯೇ ನಾಟಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹಳ್ಳಕೊಳ್ಳಗಳಿಂದ ಕೂಡಿದ ಗ್ರಾಮದ ರಸ್ತೆಯಿಂದ ರೋಸಿಹೋದ ಗ್ರಾಮಸ್ಥರಿಂದ ರಸ್ತೆಯಲ್ಲೇ ನಾಟಿ ಮಾಡಿ ವಿನೂತನ ಪ್ರತಿಭಟನೆ ನಡೆದಿದೆ. ರಸ್ತೆ ಮಧ್ಯದಲ್ಲೇ ಶಾಮಿಯಾನ ಹಾಕಿ ಅಡುಗೆ ತಯಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ನಾಗನಹಳ್ಳಿಯ ಹೆಗ್ಗಡಪುರದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಸ್ತೆ ಹಾಳಾಗಿ ಗುಂಡಿ ಬಿದ್ದಿರು ಲೆಕ್ಕಿಸದ ಜನಪ್ರತಿನಿಧಿ ಹಾಗೂ