ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಹೊಸ ನಿಯಮ ಜಾರಿಗೆ ಬಂದಿದ್ದು, ಪ್ಲಾನ್ ಪ್ರಕಾರ ಮನೆ ಕಟ್ಟದಿದ್ದವರಿಗೆ ಬಾರೀ ಹೊಡೆತ ಬೀಳುತ್ತೆ ಎನ್ನಲಾಗಿದೆ. ಮನೆ ನಿರ್ಮಿಸುವುದಕ್ಕೂ ಮುನ್ನ ಬಿಬಿಎಂಪಿ ಜೊತೆ ಒಪ್ಪಂದ ಮಾಡಿಕೊಂಡಿರಬೇಕು. ಪ್ಲಾನ್ ನಂತೆ ಮನೆ ಕಟ್ಟದಿದ್ದರೆ ಶೇ.10ರಷ್ಟು ಜಾಗ ಬಿಬಿಎಂಪಿ ಯ ಪಾಲಾಗುವುದು. ಹಾಗೇ ಅಪಾರ್ಟ್ ಮೆಂಟ್, ಮನೆಗಳಾದರೆ ಶೇಕಡಾ 5 ರಷ್ಟು ಜಾಗ ,ಕಟ್ಟಡ ನಿರ್ಮಿತ ಪ್ರದೇಶದ ಶೇ.10ರಷ್ಟು ಜಾಗ ಬಿಬಿಎಂಪಿ ಪಾಲಾಗಲಿದೆ ಎನ್ನಲಾಗಿದೆ.