ಮಹಿಳಾ ಪೊಲೀಸ್ ರಿಗೆ ಹೊಸ ಸ್ಕೂಟರ್ ಗಳ ಭಾಗ್ಯ ಲಭಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ನಿಯೋಜನೆಗೊಂಡಿರುವ ಶರಾವತಿ ಮಹಿಳಾ ಪೊಲೀಸ್ ಪಡೆಯ 25 ಮಹಿಳಾ ಸಿಬ್ಬಂದಿಗಳಿಗೆ ಸ್ಕೂಟರ್ಗಳನ್ನು ಉತ್ತರಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ವಿತರಿಸಿದರು. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಥಳಕ್ಕೆ ತೆರಳಿ ಸಂಭವನೀಯ ಅಪರಾಧವನ್ನು ತಪ್ಪಿಸಲು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಶರಾವತಿ ಪಡೆಗೆ ಇದರಿಂದ ಅನುಕೂಲವಾಗಲಿದೆ.ಶರಾವತಿ ಪಡೆಯ ಸಿಬ್ಬಂದಿಗಳು ಪ್ರತಿದಿನ