ಬೆಂಗಳೂರು (ಜು. 2): ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಈಗಾಗಲೇ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೊಲೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ರೇಖಾ ಹತ್ಯೆಯ ಮತ್ತಷ್ಟು ರೋಚಕ ಮಾಹಿತಿಗಳು ಬೆಳಕಿಗೆ ಬಂದಿವೆ. ರೇಖಾಳ ಗಂಡ ಕದಿರೇಶ್ ಕೂಡ ಈ ಹಿಂದೆ ರಸ್ತೆಯಲ್ಲೇ ಕೊಲೆಯಾಗಿದ್ದರು. ಆ ಕೊಲೆ ಮಾಡಿದವರೇ ರೇಖಾಳ ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎಂಬುದು ಪೊಲೀಸರ ಲೆಕ್ಕಾಚಾರವಾಗಿತ್ತು.