ಹಳಿಯಾಳ : ಹಣದ ಆಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶು ಮಾರಾಟ ಮಾಡಿದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಸಂಜೆ ವರದಿಯಾಗಿದೆ.ತಟ್ಟಿಗೇರಿ ಗ್ರಾಪಂನ ಗೌಳಿವಾಡದ ಸಂತ್ರಸ್ತೆ ಸಾವಿತ್ರಿ 6 ದಿನದ ಹಿಂದೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.ಹಣದಾಸೆಗಾಗಿ ಅವಳ ಸ್ವಂತ ಸಹೋದರ ಭಯ್ಯಾ ಪಟಕಾರೆ (30), ಆಶಾ ಕಾರ್ಯಕರ್ತೆ ರೋಜಿ ದಬಾಲಿ (35), ಅಗಸಲಕಟ್ಟಾಗ್ರಾಮದ ಮಮತಾಜ ಹಳಬ (30) ಅವರು