ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದರು. ಇದರ ಜೊತೆಗೆ ಅನೇಕ ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕಲುಷಿತ ನೀರನ್ನು ಸೇವಿಸಿದ ಪರಿಣಾಮ ಕಣ್ಣು ಬಿಡುವ ಮುನ್ನವೇ ನವಜಾತ ಶಿಶುವೊಂದು ಭ್ರೂಣಾವಸ್ಥೆಯಲ್ಲೇ ಮೃತಪಟ್ಟಿದೆ. ಕವಾಡಿಗರಹಟ್ಟಿ ನಿವಾಸಿ ಉಷಾ ಹಾಗೂ ಯುವರಾಜ್ ದಂಪತಿಯ ಮಗು ಜನಿಸುವ ಮುನ್ನವೇ ನಿಧನವಾಗಿದೆ. ಜುಲೈ 31ರಂದು ಕಲುಷಿತ ನೀರು ಸೇವಿಸಿದ ಪರಿಣಾಮ