ತೋಪಿನಲ್ಲಿ ಯುವತಿ ಮೇಲೆ ಹೊಸಕೋಟೆ ರೇಪ್!

ಬೆಂಗಳೂರು| Ramya kosira| Last Modified ಶುಕ್ರವಾರ, 26 ನವೆಂಬರ್ 2021 (14:58 IST)
ದೇವನಹಳ್ಳಿ : ಡ್ರಾಪ್ ಕೊಡುವುದಾಗಿ ಹೇಳಿ ಬೈಕ್ನಲ್ಲಿ ಕರೆದೊಯ್ದು ಇಬ್ಬರು ಅಪರಿಚಿತರು ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.
ಹೊಸಕೋಟೆ ಬಳಿಯ ನೀಲಗಿರಿ ತೋಪಿನ ಬಳಿ ಕರೆದೊಯ್ದು ದುಷ್ಕೃತ್ಯ ಎಸಗಲಾಗಿದೆ. 38 ವರ್ಷದ ಇನ್ನೂ ಮದುವೆಯಿಲ್ಲದೆ ಯುವತಿಯ ಮೇಲೆ ಅಪರಿಚಿತರು ಪೈಶ್ಯಾಚಿಕ ಕೃತ್ಯ ಮೆರೆದಿದ್ದಾರೆ. ನವೆಂಬರ್ 14 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 14 ರ ಸಂಜೆ ವಾಕಿಂಗ್ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ಸಂತ್ರಸ್ಥೆಯನ್ನು ಮನೆ ಬಳಿ ಬಿಡೋದಾಗಿ ನಂಬಿಸಿ ಬೈಕ್ನಲ್ಲಿ ಕೂರಿಸಿಕೊಂಡು ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಕೃತ್ಯದ ನಂತರ ಸಂತ್ರಸ್ಥೆಯನ್ನ ನೀಲಗಿರಿ ತೂಪಿನಲ್ಲೇ ಬಿಟ್ಟು ಕಾಮುಕರು ಪರಾರಿಯಾಗಿದ್ದಾರೆ. ಸದ್ಯ ಸ್ಥಳೀಯರ ಸಹಾಯದಿಂದ ಸಂತ್ರಸ್ಥೆ ಮನೆಗೆ ವಾಪಸ್ ಬಂದಿದ್ದಾರೆ.
ಘಟನೆ ನಡೆದ ರಾತ್ರಿ ಹತ್ತು ಗಂಟೆಯಾದರೂ ಮಗಳು ಮನೆಗೆ ಬಾರದ ಕಾರಣ ಮಗಳು ನಾಪತ್ತೆಯಾಗಿರೋ ಬಗ್ಗೆ ಸಂತ್ರಸ್ಥೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಮುಂಜಾನೆ ಮೂರು ಗಂಟೆಗೆ ಮಗಳು ಮನೆಗೆ ಬಂದದನ್ನು ಕಂಡು ವಿಚಾರಿಸಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ಥೆ ತಂದೆಯಿಂದ ಇದೇ 15 ರಂದು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :